ಬೆಂಗಳೂರು: ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ನಿನ್ನೆಯವರೆಗೆ 168 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ಪೈಕಿ 153 ಪುರುಷ, 15 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳಿದ್ದರೆ, ಚಿಕ್ಕೋಡಿ, ಬಿಜಾಪುರ, ಬಳ್ಳಾರಿ ಕ್ಷೇತ್ರದಲ್ಲಿ ತಲಾ 9 ಅಭ್ಯರ್ಥಿಗಳಿದ್ದಾರೆ. ಅತೀ ಕಡಿಮೆ ರಾಯಚೂರು ಜಿಲ್ಲೆಯಲ್ಲಿ 6 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಉಳಿದಂತೆ ಬೆಳಗಾವಿ 12, ಬಾಗಲಕೋಟೆ 10, ಕಲಬುರಗಿ 10, ಬೀದರ್ 17, ಕೊಪ್ಪಳ 13, ಹಾವೇರಿ 12, ಧಾರವಾಡ 14, ಉತ್ತರಕನ್ನಡ 12, ಶಿವಮೊಗ್ಗ 15 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.