ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಯಲ್ಲಿ ರಚನೆ ಮಾಡಿರುವ ಎಸ್‌ಐಟಿ ನಡೆಸುತ್ತಿರುವುದರಿಂದ ತುಮಕೂರು ಪ್ರಕರಣವನ್ನು ಸಹ ಎಸ್‌ಐಟಿ ಘಟಕಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದೆ.
ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಸಾವಿರಾರು ಕೋಟಿ ವಂಚನೆ ಆರೋಪದಲ್ಲಿ ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಇದೀಗ ಆ ಪ್ರಕರಣವನ್ನು ಸರಕಾರ ಎಸ್‌ಐಟಿಗೆ ವರ್ಗಯಿಸಲು ಸೂಚನೆ ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ರಮೇಶ್ ಮತ್ತು ರಾಬಿನ್ ಖಂಡೇಲ್‌ವಾಲಾ ಅವರ ಮೇಲೆ ಅನೇಕ ಆರೋಪಗಳಿದ್ದು, ಅವರಿಬ್ಬರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲು ಎಸ್‌ಐಟಿ ತಂಡಕ್ಕೆ ಸರಕಾರ ಸೂಚನೆ ನೀಡಿದೆ.