ಅಪರಾಧ ಸುದ್ದಿ

Uttar Pradesh: ಪಂಜಾಬ್ ನೇಷನಲ್ ಬ್ಯಾಂಕ್ ನಲ್ಲಿ 7.4 ಕೋಟಿ ನಕಲಿ ನೋಟುಗಳು ಪತ್ತೆ 

Share It

ಲಕ್ನೋ: ಉತ್ತರಪ್ರದೇಶದ ಸಹಾರನ್ ಪುರದ ಪಂಜಾಬ್ ನೇಷನಲ್ ಬ್ಯಾಂಕ್ ನಲ್ಲಿ 7.4 ಕೋಟಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. 

ಪ್ರಕರಣದ ಸಂಬಂಧ ಬ್ಯಾಂಕ್ ಅಧಿಕಾರಿಗಳು ಮತ್ತು ಕೆಲ ಅಪರಿಚಿತರ ಮೇಲೆ FIR ದಾಖಲು ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುವ ಸಂಬಂಧ ಸರಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. 

ಬ್ಯಾಂಕ್ ಸಿಬ್ಬಂದಿ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಬ್ಯಾಂಕ್ ನ ಅಸಲಿ ನೋಟುಗಳನ್ನು ಬದಲಾಯಿಸಿ, ನಕಲಿ ನೋಟುಗಳನ್ನು ಇಡುವಲ್ಲಿ ಬ್ಯಾಂಕ್ ಸಿಬ್ಬಂದಿ ಕೈವಾಡ ಇರುವುದು ದೃಢವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. 


Share It

You cannot copy content of this page