ಅಪರಾಧ ಸುದ್ದಿ

ವಾಣಿಜ್ಯ LPG ಸಿಲಿಂಡರ್ ದರ 200 ರೂ ಇಳಿಕೆ !

Share It

ನವದೆಹಲಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂ.ಗಳಿಗೂ ಹೆಚ್ಚು ಕಡಿತಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ದರ ಏರಿಕೆ ಬಳಿಕ ಎರಡನೇ ಬಾರಿಗೆ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪರಿಷ್ಕೃತ ಬೆಲೆಗಳು ತಕ್ಷಣದಿಂದಲೇ ಜಾರಿಗೆ ಬಂದಿದೆ. ದರ ಪರಿಷ್ಕರಣೆ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ ಬೆಲೆಯಲ್ಲಿ 202 ರೂ. ಮತ್ತು ಕೋಲ್ಕತ್ತಾದಲ್ಲಿ 209 ರೂ. ಇಳಿಕೆಯಾಗಿದೆ. ಪರಿಣಾಮ ಕೋಲ್ಕತ್ತಾದಲ್ಲಿ ಒಂದು ವಾಣಿಜ್ಯ ಸಿಲಿಂಡರ್‌ನ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ.

ದರ ಇಳಿಕೆ ರೆಸ್ಟೋರೆಂಟ್‌, ಹೋಟೆಲ್‌ ಮತ್ತು ಇತರ ಉದ್ಯಮಗಳು ಬಳಸುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಮನೆಗಳಿಗೆ ಸರಬರಾಜು ಮಾಡುವ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಮೆರಿಕ-ಇರಾನ್ ಯುದ್ಧ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಎಲ್‌ಪಿಜಿ ಬೆಲೆಗಳು ಮೇ ಮತ್ತು ಜೂನ್‌ನಲ್ಲಿ ತೀವ್ರ ಏರಿಕೆ ಕಂಡಿದ್ದವು. ಬಳಿಕ ಜುಲೈ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ದರ ಕಡಿಮೆ ಮಾಡಿದ್ದವು. ಇದಕ್ಕೆ ಎರಡನೇ ಬಾರಿ ದರ ಇಳಿಕೆ ಮಾಡಿವೆ.

ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿ ನಡುವೆ ಭಾರತದ ಸಿದ್ಧತೆ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಒಂದು ದಿನದ ನಂತರ ಬೆಲೆ ಪರಿಷ್ಕರಣೆ ಮಾಡಲಾಗಿದೆ. ಸಭೆಯಲ್ಲಿ, ಸರ್ಕಾರದ ಇಂಧನ ಪೂರೈಕೆ ಪರಿಸ್ಥಿತಿ ಬಗ್ಗೆ ಸಹ ಚರ್ಚೆಯಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೊರತಾಗಿಯೂ ದೇಶದಲ್ಲಿ LPG, ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.


Share It

You cannot copy content of this page