ರಾಜಕೀಯ ಸುದ್ದಿ

ನಾಳೆಯೇ ರಾಜೀನಾಮೆ ಕೊಡ್ತಾರಾ ಸಿಎಂ: ರಾಜ್ಯಪಾಲರ ಭೇಟಿಗೆ ಸಮಯ ನಿಗದಿ

Share It

ಬೆಂಗಳೂರು: ರಾಜ್ಯದಲ್ಲಿನ ಸಿಎಂ ಸ್ಥಾನ ಬದಲಾವಣೆ ಇದೀಗ ಒಂದು ಹಂತಕ್ಕೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ನಾಳೆಯೇ ತಮ್ಮ ರಾಜೀನಾಮೆ ನೀಡ್ತಾರಾ ಎಂಬ ಊಹಾಪೋಹಗಳು ಮನೆ ಮಾಡಿವೆ.

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದು, ರಾಜೀನಾಮೆ ನೀಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಈ ನಡುವೆ ಕೆಲವು ಸಿದ್ದರಾಮಯ್ಯ ಅವರ ಬೆಂಬಲಿತ ಶಾಸಕರು ಮತ್ತು ಸಚಿವರು ಈಗಲೂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಮತ್ತೊಂದು ಸುತ್ತಿನ ಕುರ್ಚಿ ಕದನದ ಸೂಚನೆ ನೀಡಿದ್ದಾರೆ.

ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಜತೆಗೆ ಬೆಳಗ್ಗೆ ರಾಜ್ಯಪಾಲರ ಭೇಟಿಗೂ ಮುನ್ನ ಸಚಿವರೊಂದಿಗೆ ಉಪಹಾರಕೂಟ ಏರ್ಪಡಿಸಲಾಗಿದ್ದು, ಅನಂತರ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.


Share It

You cannot copy content of this page