ಅಪರಾಧ ಸುದ್ದಿ

ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನ ವಶಕ್ಕೆ

Share It

ಬೆಳಗಾವಿ : ಒಂದೇ ಕಂಪನಿಯ 43 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಆರೋಪಿತನನ್ನು ಸಿನಿಮೀಯ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಬಂಧಿಸುವಲ್ಲಿ ಜಿಲ್ಲೆಯ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ರಾಮರಾಜನ್ ಕೆ ಹೇಳಿದರು.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಸೇರಿದಂತೆ ಕೆಲವು ಪ್ರದೇಶದಲ್ಲಿ ದ್ವಿಚಕ್ರ ವಾಹನಗಳು ಕಳ್ಳತನ ಅದರಲ್ಲಿ ಹಿರೊ ಹೊಂಡಾ ಸ್ಪೆಂಡರ್ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿದ್ದವು. ಆದರ ಆಧಾರದ ಮೇಲೆ ಸಿಕ್ಕ ಸುಳಿವಿನ ಮೇಲೆ ಕಾರ್ಯಾಚರಣೆಗೆ ಇಳಿದ ಕಿತ್ತೂರು ಪೊಲೀಸರ ತಂಡವು ಕಾರ್ಯಚರಣೆ ನಡೆಸಿ, ಆರೋಪಿತನನ್ನು ಬಂಧಿಸಿದ್ದಾರೆ ಎಂದರು.

ನಾರಾಯಣ ಮನೋಹರ ಕದಮ (ಸಾ: ಖಾನಾಪುರ ತಾಲೂಕಿನ ನಿಡಗಲ್ ಗ್ರಾಮ) ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ 43 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಈತ ಕಳ್ಳತನ ಮಾಡಿರುವದರಲ್ಲಿ 41 ಸ್ಪೆಂಡರ್ ವಾಹನಗಳು ಹಾಗೂ 1 ಫ್ಯಾಶನ್ ಮತ್ತು ಒಂದು ಎಚ್ ಎಫ್ ಡಿಲಕ್ಸ್ ವಾಹನಗಳು ಸೇರಿವೆ.

ಈತ ಬೆಳಗಾವಿ, ಗದಗ, ಉತ್ತರ ಕನ್ನಡ, ಧಾರವಾಡ- ಹುಬ್ಬಳ್ಳಿ, ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ. ಅದರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ ಒಟ್ಟು 25 ವಾಹನಗಳನ್ನು ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 8 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುತ್ತಾನೆ ಎಂದರು.

ಧಾರವಾಡದಲ್ಲಿ 6, ಹುಬ್ಬಳ್ಳಿ 1, ಗದಗದಲ್ಲಿ 2, ಉತ್ತರ ಕನ್ನಡದಲ್ಲಿ 2 ಕಳ್ಳತನ ಮಾಡಿದ್ದ. ಬಂಧಿತನಿಂದ ಒಟ್ಟು 43 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕಳ್ಳತನ ಮಾಡಿದ್ದ ಕೆಲವು ವಾಹನಗಳನ್ನು ಖಾನಾಪುರ ತಾಲೂಕಿನ ಮನೆಯಲ್ಲಿ ಇಟ್ಟಿರುವುದು ಪತ್ತೆ ಮಾಡಲಾಗಿದೆ.

ಅಲ್ಲದೆ ಅಕ್ಕಪಕ್ಕದ ಗ್ರಾಮದ ಕೆಲ ರೈತರಿಗೆ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಮಾರಾಟಾ ಮಾಡಿರುವ ಪತ್ತೆ ಮಾಡಲಾಗಿದೆ. ಯಾರೇ ಆಗಲಿ ಜಿಲ್ಲೆಯಲ್ಲಿ ಹಳೆ ದ್ವಿಚಕ್ರ ವಾಹನ ಗಳನ್ನು ಖರೀದಿಸುವಾಗ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಎಸ್ ಪಿ ರಾಮರಾಜನ್ ಅವರು ನಾಗರಿಕರಲ್ಲಿ ಮನವಿ ಮಾಡಿದರು. ಇಲ್ಲವಾದರೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಬರಬಹುದು ಎಂದರು.

ಪೊಲೀಸ್ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್
ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ ಡಾ. ವೀರಯ್ಯ ಹಿರೇಮಠ, ಪೊಲೀಸ್ ಉಪಾಧೀಕ್ಷಕರು, ಬೈಲಹೊಂಗಲ ಇವರ ಮಾರ್ಗದರ್ಶನದಲ್ಲಿ ಶಿವಾನಂದ ಬಿ ಗುಡಗನಟ್ಟಿ, ಸಿ.ಪಿ.ಐ ಕಿತ್ತೂರ ವೃತ್ತ, ಭರತ್ ಎಸ್. ಪಿ.ಎಸ್.ಐ, (ಕಾ&ಸು) ಕಿತ್ತೂರ ಪೊಲೀಸ್ ಠಾಣಿ, ಜಿ.ಜಿ.ಹಂಪಣ್ಣವರ ಪಿ.ಎಸ್.ಐ (ಸಿಬಿ) ಕಿತ್ತೂರು ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿ ಶರೀಪ್ ದಪೇದಾರ, ಅದೃಶ್ಯಪ್ಪ ಚಿಕ್ಕೇರಿ, ನಾಗರಾಜ ಕಡಗನ್ನವರ, ಸುನೀಲ ಮುರಗೋಡ, ಬಾಹುಬಲಿ ಅಗಸಿಮನಿ, ಹನುಮಂತ ಜೀವಾಪುರ, ಮತ್ತು ತನಿಖಾ ಸಹಾಯಕರಾದ ಎಂ.ಬಿ.ಕಂಬಾರ, ಎಂ.ಎಸ್.ಹಳ್ಳಿ, ಎಂ.ಆರ್.ಲಮಾಣಿ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್‌ನ ಸಚಿನ್ ಪಾಟೀಲ ಇವರುಗಳ ತಂಡ ಯಶಸ್ವಿ
ಕಾರ್ಯಾಚರಣೆ ಮಾಡಿರುತ್ತಾರೆ. ತಂಡದ ಉತ್ತಮ ಪತ್ತೆ ಎಸ್ ಪಿ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಎಸ್ ಪಿ ಬಸರಗಿ ಶ್ಲಾಘಿಸಿರುತ್ತಾರೆ.


Share It

You cannot copy content of this page