ರಾಜಕೀಯ ಸುದ್ದಿ

ಇಂದಿನಿಂದ ವಿಧಾನಸಭೆ ಅಧಿವೇಶನ: ಸರಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಿದ್ಧ

Share It

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ.

ವಾಲ್ಮೀಕಿ ಹಗರಣದ ಆರೋಪಿ ಬಿ ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು ಸೇರಿದಂತೆ ಬಿಡದಿ ರೈತರ ಹೋರಾಟವನ್ನು ಮುಖ್ಯವಾಗಿಟ್ಟುಕೊಂಡು, ಹೋರಾಟಕ್ಕೆ ಸಜ್ಜಾಗಿದೆ. ಈಗಾಗಲೇ ಬಿಡದಿ ರೈತರ ಪರ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪಾದಯಾತ್ರೆ ಆರಂಭಿಸಿದ್ದು, ಅಧಿವೇಶನದಲ್ಲಿ ಹೋರಾಟ ಕಾವೇರಲಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಕೂಡ ವಿಪಕ್ಷಗಳ ಹೋರಾಟದ ಭಾಗವಾಗಲಿದೆ. ನಾಗೇಂದ್ರ ರಾಜೀನಾಮೆ ಕೊಡುವ ವರೆಗೆ ಅಧಿವೇಶನ ನಡೆಯಲು ಬಿಡುವುದಿಲ್ಲ ವೆಂಡು ಈಗಾಗಲೇ ಬಿಜೆಪಿ ಹೇಳಿದ್ದು, ಬಿಡದಿ ಹೋರಾಟವನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.


Share It

You cannot copy content of this page