ಅಪರಾಧ ಸುದ್ದಿ

ಆಟವಾಡುತ್ತಿದ್ದ ಮಕ್ಕಳ ಮೇಲೆ ಮುರಿದುಬಿದ್ದ ಗೇಟ್ : ಐದು ವರ್ಷದ ಮಗು ಸಾವು

Share It

ನೆಲಮಂಗಲ: ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆಯ ಗೇಟ್ ಮುರಿದುಬಿದ್ದ ಪರಿಣಾಮ ಐದು ವರ್ಷದ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಭೀಕರ ದುರಂತ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ.

ಗೌಸಿಯಾ ಎಂಬ 5 ವರ್ಷದ ಮಗು ಮೃತ ದುರ್ದೈವಿ. ಘಟನೆಯಲ್ಲಿ ಸುಮಯ ಎಂಬ ಮತ್ತೊಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಂಬಂಧ ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಇಮಾಮ್ ಮತ್ತು ರಮೀಜಾ ದಂಪತಿ ರವಿಶಂಕರ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ 5 ತಿಂಗಳ ಹಿಂದೆಯಷ್ಟೇ ಬಾಡಿಗೆಗೆ ಬಂದಿದ್ದರು. ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಯ ಪುತ್ರಿ ಮನೆ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದಳು. ಹಳೆಯದಾಗಿದ್ದರಿಂದ ಕಾಂಪೌಂಡ್ ಗೋಡೆ ಸಮೇತ ಗೇಟ್ ಕುಸಿದು ಬಿದ್ದು ಗೌಸಿಯಾ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾಳೆ.


Share It

You cannot copy content of this page