ಬೆಂಗಳೂರು: ಯಾವುದೇ ಭಿನ್ನಮತಕ್ಕೆ ಅವಕಾಶ ನೀಡದಂತೆ ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿದ್ದು ಇಂದು ಮಧ್ಯಾಹ್ನವೇ ರಾಜೀನಾಮೆ ನೀಡಲಿದ್ದಾರೆ.
ಬ್ರೇಕ್ ಫಾಸ್ಟ್ ಸಭೆಯಲ್ಲಿ ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡಿದ್ದು, ಸಭೆಯಲ್ಲಿ ರಾಜೀನಾಮೆ ಕುರಿತು ಪ್ರಕಟ ಮಾಡಿದರು. ನಂತರ ಸಚಿವ ಸಂಪುಟದ ಪುನಾರಚನೆ ಕುರಿತು ಕೆಲವು ಚರ್ಚೆಗಳನ್ನು ನಡೆಸಲಾಯಿತು. ಅನಂತರ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುವ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಕಟ ಮಾಡಿದರು.

