ಅಪರಾಧ ರಾಜಕೀಯ ಸುದ್ದಿ

ಜಂತರ್-ಮಂತರ್ ಪ್ರತಿಭಟನೆ : 75 ಮೇಲ್ ಎಕ್ಸ್‌ಪ್ರೆಸ್ ರೈಲು ರದ್ದು

Share It

ಬೆಂಗಳೂರು: ಜಂತರ್ ಮಂತರ್ ನಲ್ಲಿ ಕೇಂದ್ರ ಸರಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಸರಕಾರ ದೆಹಲಿಗೆ ಆಗಮಿಸಬೇಕಿದ್ದ 75 ರೈಲುಗಳನ್ನು ರದ್ದುಗೊಳಿಸಿದೆ.

ಉತ್ತರ ವಲಯ ರೈಲು ವಿಭಾಗದ ಅಧಿಕಾರಿಗಳ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿಗೆ ವಿವಿಧ ಭಾಗಗಳಿಂದ ಆಗಮಿಸುವ 75 ರೈಲುಗಳನ್ನು ತಡೆಯಲಾಗಿದೆ. ಕೆಲವು ರೈಲುಗಳನ್ನು ತಪಾಸಣೆ ನಡೆಸುತ್ತಿರುವ ಪೊಲೀಸರು, ಪ್ರತಿಭಟನೆ ತೆರಳುತ್ತಿರುವವರನ್ನು ಅನಧಿಕೃತವಾಗಿ ಬಮಧಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ವರದಿಯಾಗಿವೆ.

ದೆಹಲಿಯ 57 ಮೆಟ್ರೋ ನಿಲ್ದಾಣಗಳ ಬಂದ್ ಸಂಬಂಧಿಸಿದಂತೆ ಪರಿಷ್ಕರಣೆ ಮಾಡಿ 45 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಇಲ್ಲಿಗೆ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ರದ್ದುಗೊಳಿಸಲಾಗಿದೆ. ಸಂಜೆ 6 ಗಂಟೆಯವರೆಗೆ ನಿಬರ್ಂಧ ಹಾಕಿದ್ದು, ಸುಪ್ರೀಂ ಕೋರ್ಟ್ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.

ಜಂತರ್-ಮಂತರ್ ವ್ಯಾಪ್ತಿಯ ನಾಲ್ಕು ಕಿ.ಮೀ. ದೂರದವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ಗೃಹ ಇಲಾಖೆ ಸೂಚನೆ ನೀಡಿದೆ. ಅನಗತ್ಯ ಓಡಾಟವನ್ನು ನಿಯಂತ್ರಿಸುವಂತೆ ದೆಹಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.


Share It

You cannot copy content of this page