ಬೆಂಗಳೂರು: ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಬ್ಬ ಆರೋಪಿ ನವೀನ್ ಗೌಡ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನನಗೆ ರಸ್ತೆಯಲ್ಲಿ ಸಿಕ್ಕಿದ ಪೆನ್ ಡ್ರೆöÊವ್ ವೊಂದನ್ನು ಅರಕಲಗೂಡು ಕಲ್ಯಾಣಮಂಟಪದಲ್ಲಿ ಶಾಸಕ ಎ.ಮಂಜು ಅವರ ಕೈಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಅವರು ಹೇಳಿದಂತೆ ಮಂಜು ಅವರೇ ಅದನ್ನು ಬಹಿರಂಗ ಮಾಡಿದ ಮಹಾನಾಯಕ ಇರಬಹುದು ಎಂದು ಪೋಸ್ಟ್ ಮಾಡಿದ್ದಾನೆ.
ಆ ಮೂಲಕ ಜೆಡಿಎಸ್ ನಾಯಕರ ಪೆನ್ ಡ್ರೈವ್ ಹಂಚಿಕೆಯ ಹಿಂದೆ ಕೆಲಸ ಮಾಡಿದ್ದಾರೆ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾನೆ. ಎಸ್‌ಐಟಿ, ದೇವರಾಜೇಗೌಡ ಮತ್ತು ನವೀನ್ ಗೌಡಗೆ ನೊಟೀಸ್ ನೀಡಿದ್ದರು. ಇದೀಗ ದೇವರಾಜೇಗೌಡ ಸೇರಿ ಮತ್ತಿಬ್ಬರು ಆರೋಪಿಗಳನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ.
ಇಂತಹದ್ದೊAದು ಆರೋಪ ಜೆಡಿಎಸ್ ಶಾಸಕರ ಮೇಲೆಯೇ ಬಂದಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಎ. ಮಂಜು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದಾಗಿನಿಂದಲೂ ರೇವಣ್ಣ ಅವರ ಪರಮವಿರೋಧಿಯಾಗಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ಸೇರಿ ಶಾಸಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆರೋಪ ಮಹತ್ವ ಪಡೆದುಕೊಂಡಿದೆ.
ನವೀನ್ ಗೌಡ ಯಾರು ಗೊತ್ತೆ ಇಲ್ಲ: ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಎ.ಮಂಜು, ನವೀನ್ ಗೌಡ ಯಾರು ಎಂಬುದು ನನಗೆ ಗೊತ್ತೇ ಇಲ್ಲ, ಅಷ್ಟಕ್ಕೂ ಆತ ನನಗೆ ಪೆನ್ ಡ್ರೈವ್ ಕೊಟ್ಟಿದ್ದಾನೆ ಎಂದರೆ, ಎಲ್ಲರಿಗೂ ಪೆನ್ ಡರೈವ್ ಹಂಚಿಕೆ ಮಾಡಿದ್ದು ಅವನೇ ಇರಬಹುದು. ಹೀಗಾಗಿ, ಪೊಲೀಸರು ಆತನನ್ನು ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬೀಳಿದೆ ಎಂದು ಹೇಳಿದ್ದಾರೆ.