ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಹಿಳೆಯರ ಬದುಕುವ ಹಕ್ಕು ಮತ್ತು ಘನತೆಯ ಅವಿಭಾಜ್ಯ ಅಂಗವಾಗಿದೆ. 18-52 ವರ್ಷ ವಯಸ್ಸಿನ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ‘ಮುಟ್ಟಿನ ರಜೆ’ ಕಡ್ಡಾಯಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಸೌಲಭ್ಯವನ್ನು ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಮಹಿಳೆಯರಿಗೆ ವಿಸ್ತರಿಸಲು ಮತ್ತು ‘ಕರ್ನಾಟಕ ಮುಟ್ಟಿನ ರಜೆ ಮಸೂದೆ-2025’ ಅನ್ನು ರೂಪಿಸಲು ಆದೇಶಿಸಿದೆ.

