ಸುದ್ದಿ

ಈ ಗ್ರಾಮದಲ್ಲಿ ಬೀಗರೂಟ ಮಾಡಿದ್ರೆ ಒಂದು ಲಕ್ಷ ರುಪಾಯಿ ದಂಡ !

Share It

ಶಿವಮೊಗ್ಗ: ಮದುವೆ ನಂತರ ನಡೆಯುವ ಬೀಗರೂಟ ಕಾರ್ಯಕ್ರಮ ನಡೆಸದಂತೆ ಕಡಿವಾಣ ಹಾಕಿದ್ದ, ಬೀಗರೂಟ ನಡೆಸಿದ ಕುಟುಂಬಗಳಿಗೆ ಒಂದು ಲಕ್ಷ ರು ವಿಧಿಸಲು ಗ್ರಾಮಸ್ಥರು ತೀರ್ಮಾನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕ್ಷೇತ್ರವಾದ ಶಿಕಾರಿಪುರದ ಹರಗಿ ಗ್ರಾಮದಲ್ಲಿ ಇಂತಹದ್ದೊಂದು ತೀರ್ಮಾನ ತೆಗೆದುಕೊಂಡಿದ್ದು, ಗ್ರಾಮಸ್ಥರೆಲ್ಲ ಸೇರಿ ಒಕ್ಕೋರಲಿನಿಂದ ಈ ನಿರ್ಧಾರ ಮಾಡಿದ್ದಾರೆ. ಅನಗತ್ಯ ಖರ್ಚು, ಸಾಮಾಜಿಕ ಒತ್ತಡ ಮತ್ತು ಕುಟುಂಬಗಳ ಮೇಲೆ ಬೀಳುವ ಅತಿಯಾದ ಆರ್ಥಿಕ ಹೊರೆಯನ್ನು ತಡೆಯುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅದ್ದೂರಿ ಮದುವೆಗಳಿಗೆ ಯಾವುದೇ ಕಡಿವಾಣ ಹಾಕದೆ, ಖರ್ಚಿನ ರೂಪದಲ್ಲಿ ಬೀಗರೂಟಕ್ಕಷ್ಟೇ ತಡೆಯೊಡ್ಡಟುತ್ತಿರುವುದು ಎಷ್ಟು ಸರಿ ಎಂಬ ಚರ್ಚೆಗಳು ನಡೆದಿದೆ. ಸಾಮಾನ್ಯವಾಗಿ ಮದುವೆಯ ಖರ್ಚು ಹೆಣ್ಣಿನ ಮನೆಯವರದಾಗಿದ್ದು, ಬೀಗರೂಟದ ಖರ್ಚು ಗಂಡಿನ ಮನೆಯವರದ್ದಾಗಿರುತ್ತದೆ. ಹೀಗಿದ್ದೂ, ಬೀಗರೂಟದ್ದಷ್ಟೇ ಆರ್ಥಿಕ ಹೊರೆ ಎಂದು ನಿರ್ಧರಿಸಲು ಸಾಧ್ಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಮಾಂಸಾಹಾರ ಸೇವನೆಗೆ ಕಡಿವಾಣ ಹಾಕಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಮತ್ತೇ ಕೆಲವರು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರ ಮುನ್ಸೂಚನೆ ಇದು. ಸರಕಾರವನ್ನು ಶಪಿಸಲಾಗದ ಜನರು ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಿದ್ದಾರೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.


Share It

You cannot copy content of this page