ಅಂಕಣ

ಕವಿತೆ

Share It

-: ಮನದ ಚಂದಿರೆ :-

ಮಹಾಮನೆಯ ಮುದ್ದಾದ
ಮಂದಾರದ ಮೌನ ಮಲ್ಲಿಗೆ!
ಮನವ ಕದ್ದ ಬೆಳ್ಳಿ ಗೊಂಬೆಯೆ
ಮನೆ ಮನದೊಡತಿಯಾಗು ಬಾ ಬಾಳಿಗೆ!! ೧!!

ಬಾನ ಚಂದಿರಳು ಇರುಳಿಗೆ
ಬೆಳದಿಂಗಳಾಲುಕ್ಕಿ ಹರಿದಾಗೆ!
ಎನ್ನ ಮನದ ಚಂದಿರಳೆ
ಸಿರಿಹೊನ್ನ ಸುರಿವ ಮಳೆಯಾಗಿ ಬಾರೆ
ಎನ್ನ ಬರುಡಾದ ಬಾಳಿಗೆ !! ೨ !!

ಪ್ರೇಮ ಪಕ್ಷಿಯಾಗಿ ಬಾರೆ
ತನು ಮನವ ತುಂಬಿ ಕೊಂಡು
ಎನ್ನೆದೆಯ ಗೂಡಿಗೆ!
ಪ್ರೇಮ ಪಲ್ಲಕ್ಕಿಯಲ್ಲಿ ಮೆರೆಸುವೆ
ರಾಣಿ ಮಹಾರಣಿಯಾಗಿಸಿ
ಎನ್ನ ಹೃದಯದರಮನೆಯೊಳಗೆ !! ೩ !!

ಎನ್ನೆದೆಯ ಬಾನಿಗೆ
ಪ್ರೇಮದ ತೊಟ್ಟಿಲ ಕಟ್ಟಿ
ಪ್ರೀತಿಯ ಜೋಗುಳ ಹಾಡುವೆ !
ಚಿಲಿಪಿಲಿ ಹಕ್ಕಿಗಳ ಕಲರವದಾಗೆ
ಮಹಾಮರದ ಕೋಗಿಲೆಯಂತೆ
ಮಧುರ ಮಂಜುಳ ಗಾನವು !! ೪ !!

ಶಿವ ಪಾರ್ವತಿಯರೆ ನಾಚುವಂತೆ
ಜಗವ ಸುತ್ತೋಣ ಸಂಗಾತಿಗಳಾಗಿ!
ಜಗ ಮೆಚ್ಚಿ ಹೆಮ್ಮೆಯಿಂದೊಗಳಿ
ನಮ್ಮ ನೋಡಿ ಬದುಕುವಂತೆ ಬಾಳೋಣ
ಬಾರೆ ಬಾಳಿಗೆ ಸಂಗಾತಿಯಾಗಿ !!೫!!-

ಶ್ರೀಶೈಲ್ ಬಿರಾದಾರ ನಾಗನಟಗಿ
9008659817


Share It

You cannot copy content of this page