ಬೆಂಗಳೂರು: ಬೆಂಗಳೂರು-ಮೈಸೂರು ಹೈವೆಯಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಪೋನ್ ಬಳಕೆ ಮಾಡುತ್ತಿದ್ದ ಡ್ರೈವರ್ ಫೋಟೋವನ್ನು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹಂಚಿಕೊAಡಿದ್ದು, ಆತನ ವಿರುದ್ಧ ಕ್ರಮಕ್ಕೆ ಕೆಎಸ್ಆರ್ಟಿಸಿಗೆ ಒತ್ತಾಯಿಸಿದ್ದಾರೆ.
ಮೈಸೂರು ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ಕಣ್ಣಿಡಲು ನೂರಾರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆ ಕ್ಯಾಮೆರಾದಲ್ಲಿ ಕೆಎಸ್ಆರ್ಟಿಸಿ ಸೇರಿ ವಿವಿಧ ಕಾರುಗಳ ಚಾಲಕರು ಮೊಬೈಲ್ ಬಳಸುತ್ತಾ ವಾಹನ ಚಾಲನೆ ಮಾಡಿರುವ ಫೋಟೋಗಳು ಸೆರೆಯಾಗಿವೆ. ಈ ಎಲ್ಲ ಪೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಜತೆಗೆ, ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಕೆಎಸ್ಆರ್ಟಿಸಿಗೆ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿರುವ ಅಲೋಕ್ ಕುಮಾರ್, ಬಸ್ ಸಂಖ್ಯೆ, ದಂಡದ ವವರಗಳನ್ನು ಹಂಚಿಕೊAಡಿದ್ದಾರೆ. ಪೊಲೀಸ್ ಇಲಾಖೆ ದಂಡ ವಿಧಿಸಿದರೆ ಸಾಲದು, ಅರವತ್ತೂ ಜನ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ಲೋಪ ಮಾಡಿರುವ ಡ್ರೈವರ್ ಮೇಲೆ ನಿಗಮ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕಾರು ಚಾಲಕರು ಮೊಬೈಲ್ ಬಳಸುವುದರಿಂದ ಆಗುವ ಅನಾಹುತಕ್ಕೆ ಕುಟುಂಬಗಳು ಹೊಣೆಗಾರರಾಗುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರು ರಸ್ತೆಯಲ್ಲಿ ಕೇವಲ ೧೫ ದಿನಗಳ ಅಂತರದಲ್ಲಿ ಸುಮಾರು ೧೨೧೯೨ ಸಂಚಾರ ನಿಯಮ ಉಲ್ಲಂಘಟನೆ ಪ್ರಕರಣಗಳು ವರದಿಯಾಗಿವೆ. ನಮ್ಮ ಪೊಲೀಸ್ ಕ್ಯಾಮೆರಾಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿವೆ. ಸಂಚಾರ ನಿಯಮ ಉಲ್ಲಂಘನೆಯಿAದ ಅಪಘಾತವಾದರೆ, ಇದನ್ನು ಕುಟುಂಬದವರು ಸಹಿಸಿಕೊಳ್ಳಲು ಸಾಧ್ಯವೇ ಎಂದು ಟ್ವಿಟ್ ಮಾಡಿದ್ದಾರೆ.