ಕಳೆದ ರ‍್ಷ ದಾಖಲೆ ಬರಗಾಲದಿಂದ ತತ್ತರಿಸಿದ್ದ ರ‍್ನಾಟಕದ ರೈತರಿಗೆ ಇದು ಬಹಳ ಒಳ್ಳೆಯ ಸುದ್ದಿ. ಅದೇನೆಂದರೆ ಈ ರ‍್ಷದ ನೈರುತ್ಯ ಮಾನ್ಸೂನ್ ಈ ಮೇ ತಿಂಗಳ ೩೧ ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಕೇರಳಕ್ಕೆ ಮೇ ೩೧ ರಂದು ನೈರುತ್ಯ ಮಾನ್ಸೂನ್ ಬಂದ ನಂತರ ಮರ‍್ನಾಲ್ಕು ದಿನಗಳಲ್ಲಿ ರ‍್ನಾಟಕವನ್ನು ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ತಿಳಿಸಿದೆ. ಈ ಬಾರಿಯ ಮುಂಗಾರು ಇದೇ ಮೇ ೨೭ ಮತ್ತು ಜೂನ್ ೪ ರ ನಡುವೆ ಆರಂಭವಾಗುವುದು ಖಚಿತ ಎಂದು ಸಹ ಹವಾಮಾನ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಎಂಡಿ ಮಹಾನರ‍್ದೇಶಕ ಮೃತ್ಯುಂಜಯ್ ಮಹಾಪಾತ್ರ ಮೇ ೩೧ ರಂದು ನೈರುತ್ಯ ಮುಂಗಾರು ಕೇರಳಕ್ಕೆ ಬರಬಹುದು, ಆಫ್ ಇದರಲ್ಲಿ ೪ ದಿನಗಳ ವ್ಯತ್ಯಾಸವಾಗಬಹುದು. ಆದಾಗ್ಯೂ ಈ ಬಾರಿ ಮುಂಗಾರು ಮಳೆ ಅವಧಿಗೂ ಮುನ್ನ ಭಾರತ ಪ್ರವೇಶಿಸುತ್ತಿಲ್ಲ, ಸಾಮಾನ್ಯವಾಗಿ ಜೂನ್ ೧ ಕ್ಕೇ ಪ್ರವೇಶಿಸುತ್ತಿರುವ ಕಾರಣ ಸಾಮಾನ್ಯ ದಿನಾಂಕಕ್ಕೆ ಹತ್ತಿರದಲ್ಲಿದೆ ಎಂದು ತಿಳಿಸಿದ್ದಾರೆ.
ಹೌದು, ಭಾರತದಲ್ಲಿ ಕೃಷಿ ಪ್ರಧಾನ ಮತ್ತು ಮಳೆಯಾಶ್ರಿತ ಕೃಷಿಯೇ ಹೆಚ್ಚಿರುವುದರಿಂದ ಮಾನ್ಸೂನ್ ನರ‍್ಣಾಯಕವಾಗಿದೆ. ಇದು ದೇಶದ ವರ‍್ಷಿಕ ಮಳೆಯ ಬಹುಪಾಲನ್ನು ನರ‍್ಧರಿಸುತ್ತದೆ. ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆ ಈ ಅವಧಿಯಲ್ಲಿ ನಡೆಯುವುದರಿಂದ ಈ ಅವಧಿಯಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳನ್ನು ಕೃಷಿಯಲ್ಲಿ ಪ್ರಮುಖ ಮಾನ್ಸೂನ್ ತಿಂಗಳುಗಳು ಎಂದು ಪರಿಗಣಿಸಲಾಗುತ್ತದೆ. ಕಳೆದ ರ‍್ಷ ಜೂನ್ ೮ ರಂದು ಮುಂಗಾರು ಆರಂಭವಾಗಿ, ೪ ದಿನ ತಡವಾಗಿ ವಿಳಂಬವಾಗಿ ಪ್ರವೇಶಿಸಿತ್ತು