ಎತ್ತ ನೋಡಿದರತ್ತ ಹಾಲ್ನೊರೆಯಂತೆ ಮುತ್ತಿಡುವ ಮಂಜಿನ ಮುಸುಕು ಜೊತೆಗೆತಣ್ಣಗೆ ಬೀಸುವ ತಣ್ಣನೆ ಗಾಳಿ ವಾಹ್ ಇನ್ನೇನ್ ಕೈಗೆ ಸಿಕ್ಕೆ ಬಿಡುತ್ತದೆ ಎಂಬ ಆಕಾಶ. ಇದು ಮುಳ್ಳಯ್ಯನಗಿರಿ ಬೆಟ್ಟದ ಪ್ರಮುಖ ಆಕರ್ಷಣೆ.
ಮುಳ್ಳಯ್ಯನಗಿರಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟದ ಸಾಲಿನಲ್ಲಿರುವ ಒಂದು ಶಿಖರ. 1920 ಮೀಟರ್ (6330 ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪವರ್ತ ಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿರುವ ಅತೀ ಎತ್ತರದ ಪರ್ವತ ಕೂಡ ಹೌದು.
ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕಲಾವಿದರ ಕುಂಚದಲ್ಲಿ ಮೂಡಿರುವಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು, ದಟ್ಟಅರಣ್ಯ ಮತ್ತು ಗಿರಿಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿನ ಪರ್ವತಗಳು ಒಂದಕ್ಕಿAತ ಒAದು ಮೋಹಕ. ಇವುಗಳಲ್ಲಿ ಮುಳ್ಳಯ್ಯನಗಿರಿ ಬೆಟ್ಟ ಪ್ರಮುಖವಾದುದ್ದು, ಕಾಫಿನಾಡು ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬೆಟ್ಟಇದೆ. ಇನ್ನು ಚಿಕ್ಕಮಗಳೂರಿಂದ ಸುಮಾರು ೨೦ ಕಿ.ಮೀ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರದ ಶಿಖರ ಎಂಬ ಖ್ಯಾತಿಯನ್ನು ಪಡೆದಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 6330 ಅಡಿಗಳಷ್ಟು ಎತ್ತರದಲ್ಲಿದೆ. ಆದ್ದರಿಂದ ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಈ ಮುಳ್ಳಯ್ಯನಗಿರಿ ಬೆಟ್ಟ. ಬೆಟ್ಟದ ಬುಡದಲ್ಲಿ ನಿಂತು ಮೇಲೆ ನೋಡಿದರೆ ಮೋಡಗಳು ಗಿರಿಶಿಖರವನ್ನು ಆವರಿಸಿಕೊಂಡAತೆ ಅನುಭವವಾಗುತ್ತದೆ. ಅದೆ ಮುಂದೆ ಸಾಗಿ ಬೆಟ್ಟದ ತುದಿ ತಲುಪಿದರೆ ತಕ್ಷಣ ಮೋಡಗಳು ಮಾಯವಾಗುತ್ತದೆ. ಮಂಜಿನ ಹನಿಗಳ ನಡುವಿನ ಚಿತ್ತಾರ, ಚುಮುಚುಮು ಚಳಿಯಲ್ಲಿ ಮಳೆಯ ಸಿಂಚನ ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಕಣ್ಣ ಮುಚ್ಚಾಲೆಯ ಆಟ ಒಂದು ಸುಂದರ ಅನುಭವವನ್ನು ಪ್ರವಾಸಿಗರಿಗೆ ಕೊಡುತ್ತದೆ.
ದಾರಿ ಹೇಗೆ?
ಮುಳ್ಳಯ್ಯನಗಿರಿ ಮಂಗಳೂರಿನಿAದ ಸುಮಾರು 172 ಕಿ.ಮೀ ದೂರದಲ್ಲಿದೆ. ಉಡುಪಿಯಿಂದ 147 ಕಿ.ಮೀ , ಬೆಂಗಳೂರಿನಿAದ 264 ಕಿ.ಮೀ ಉಜಿರೆಯಿಂದ 106 ಕಿ.ಮೀ ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಕೂಡ ಹೋಗಬಹುದು. ಇದಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಹೋಗಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‌ಗಳ ಸೇವೆ ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಬೆಟ್ಟಕ್ಕೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆ ಕೂಡ ಇದೆ. ಜತೆಗೆ ಸ್ವಂತ ವಾಹನಗಳು ಇಲ್ಲದ ಪ್ರವಾಸಿಗರು ಬಾಡಿಗೆ ವಾಹನಗಳನ್ನು ಮಾಡಿಕೊಂಡು ಮುಳ್ಳಯ್ಯನಗಿರಿ ಬೆಟ್ಟಕ್ಕೆ ಹೋಗಬಹುದು.