ಕ್ರೀಡೆ ಸುದ್ದಿ

1 ಸೋತು 7 ಗೆದ್ದವರು V/S  1 ಗೆದ್ದು7 ಸೋತವರು !

Share It

ಬೆಂಗಳೂರು; ಕೊನೆಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಪ್ಲೇ ಆಪ್ ಪ್ರವೇಶಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮನೇಟರ್ ಪಂದ್ಯವನ್ನು ಆಡಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕನೇ ಸ್ಥಾನದಲ್ಲಿರುವ ಆರ್ ಸಿಬಿ ಎಲಿಮನೇಟರ್ ಪಂದ್ಯದಲ್ಲಿ ಸೆಣೆಸಲಿದೆ, ಬಲಾಬಲದ ದೃಷ್ಟಿಯಿಂದ ಎರಡು ತಂಡಗಳು ಸಮಾನ ಬಲಶಾಲಿಯಾಗಿವೆ ಎನ್ನಬಹುದು.

ಆದರೆ, ಲೀಗ್ ಹಂತದ ಈ ಎರಡು ತಂಡಗಳ ಬಲ ಪ್ರದರ್ಶನ ಗಮನಿಸದರೆ, ಅಜಗಜಾಂತರ ವ್ಯತ್ಯಾಸ ಕಾಣುತ್ತದೆ. ಲೀಗ್ ಹಂತದಲ್ಲಿ ಒಟ್ಟು ಎಂಟು ಗೆಲುವಿನೊಂದಿಗೆ ಹದಿನೇಳು ಅಂಕ ಪಡೆದಿರುವ ರಾಜಸ್ಥಾನ ತಂಡ, ಹದಿನಾಲ್ಕು ಅಂಕ ಪಡೆದಿರುವ ಆರ್ ಸಿಬಿ ಜತೆಗೆ ಸೆಣೆಸಲಿದೆ.

ಆರ್ ಸಿಬಿ ಮೊದಲ ಎಂಟು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತಿದ್ದು, ಪಂಜಾಬ್ ವಿರುದ್ಧ ಹೊರತುಪಡಿಸಿ ಉಳಿದೆಲ್ಲ ತಂಡಗಳ ಎದುರು ಸೋಲುಂಡಿತ್ತು. ಆದರೆ, ಅದೇ ರಾಜಸ್ಥಾನ್ ತಂಡ ಆಡಿದ ಎಂಟು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಮಾತ್ರ ಸೋತು ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ಏಳು ಪಂದ್ಯಗಳ ಮೊದಲ ಚರಣ ಮುಗಿದಾಗ ರಾಜಸ್ಥಾನ ರಾಯಲ್ಸ್ ತಂಡ ಹನ್ನೆರಡು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎರಡು ಅಂಕಗಳನ್ನು ಮಾತ್ರ ಗಳಿಸಿ ಕೊನೆಯ ಸ್ಥಾನದಲ್ಲಿತ್ತು. ಬಹುತೇಕ ಕ್ರಿಕೆಟ್ ಪಂಡಿತರು, ಐಪಿಎಲ್ ನಿಂದ ಹೊರನಡೆಯುವ ಮೊದಲ ತಂಡ ಆರ್ ಸಿಬಿ ಎಂದು ವಿಶ್ಲೇಷಿಸಿದ್ದರು.

ಈಗ ಒಟ್ಟು ಅಂಕಗಳ ಪೈಕಿ ರಾಜಸ್ಥಾನ್ ರಾಯಲ್ಸ್ ಹದಿನೇಳು, ಆರ್ ಸಿಬಿ ಹದಿನಾಲ್ಕು ಅಂಕ ಪಡೆದುಕೊಂಡಿವೆ. ಹೀಗಾಗಿ, ಆರ್ ಸಿಬಿ ಬಲಾಡ್ಯ ತಂಡವಾಗಿ ಕಾಣಿಸುತ್ತಿದ್ದು, ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.


Share It

You cannot copy content of this page