ಹುಬ್ಬಳ್ಳಿ: ಇಡೀ ರಾಜ್ಯದ ನಿದ್ದೆಗೆಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ತೀರ್ಮಾನಿಸಿದೆ.
ನೇಹಾ ಹಿರೇಮಠ್ ಕೊಲೆಯನ್ನು ಆಕೆಯ ಸಹಪಾಠಿ ಫಯಾಜ್ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದು, ವೈರಲ್ ಆಗುವ ಮೂಲಕ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣ ರಾಜಕೀಯ ತಿರುವನ್ನು ಪಡೆದುಕೊಂಡು, ಬಿಜೆಪಿ ಪ್ರಕರಣವನ್ನು ಲವ್ ಜಿಹಾದ್ ಎಂದು ಆರೋಪಿಸಿತ್ತು.
ಸರಕಾರ ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ನೇಮಕ ಮಾಡಿ ಆದೇಶ ಹೊರಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಭರವಸೆ ನೀಡಿತ್ತು. ಪ್ರಕರಣದ ತನಿಖೆ ಆರಂಭಿಸಿದ ಎಸ್‌ಐಟಿ, ಫಯಾಜ್‌ನನ್ನು ವಶಕ್ಕೆ ಪಡೆದು, ಮಹಜರು ನಡೆಸಿ, ಪ್ರಕರಣಕ್ಕೆ ಸಂಬAಧಿಸಿದ ಅನೇಕರನ್ನು ವಿಚಾರಣೆಗೆ ಒಳಪಡಿಸಿತ್ತು.
ಎಸ್‌ಐಟಿ ಆರೋಪಿ ಫಯಾಜ್ ತಾಯಿಯೂ ಸೇರಿ ೧೦ ಜನರ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಫಯಾಜ್ ಜತೆಗೆ, ನೇಹಾ ಹಿರೇಮಠ್ ಪ್ರೀತಿಯಿದ್ದದ್ದು, ಅವರ ನಡುವಿನ ಬಿರುಕು, ಸಾಮಾಜಿಕ ಒತ್ತಡ ಸೇರಿ ವಿವಿಧ ವಿಚಾರಗಳ ಕುರಿತು ತನಿಖೆ ನಡೆಸಲಾಗಿದೆ. ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ, ಒಂದು ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದು, ಫಯಾಜ್‌ಗೆ ಕಠಿಣ ಶಿಕ್ಷೆ ಕೊಡಿಸುವಂತೆ ಸಾರ್ವಜನಿಕರಿಂದ ಒತ್ತಡ ಕೇಳಿಬಂದಿದೆ.