ಆರೋಗ್ಯ ಉಪಯುಕ್ತ ರಾಜಕೀಯ ಸುದ್ದಿ

ಕೋವಿಶೀಲ್ಡ್ ಮಾತ್ರವಲ್ಲ. ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿಯೂ ಅಡ್ಡ ಪರಿಣಾಮ

Share It

ಬೆಂಗಳೂರು: ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಉಂಟಾಗುತ್ತಿದೆ ಎಂಬುದನ್ನು ಕಂಪನಿ ಒಪ್ಪಿಕೊಂಡ ಬೆನ್ನಲ್ಲೇ, ಕೋವ್ಯಾಕ್ಸಿನ್ ಪಡೆದವರಲ್ಲಿಯೂ ಅಡ್ಡಪರಿಣಾಮಗಳು ಉಂಟಾಗುತ್ತಿವೆ ಎಂದು ವರದಿಯೊಂದು ತಿಳಿಸಿದೆ.

ಭಾರತ್ ಬಯೋಟಿಕ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಕೋವ್ಯಾಕ್ಸಿನ್ ಅನ್ನು ದೇಶದ ಸುಮಾರು ೪೦-೫೦ ಕೋಟಿ ಜನರಿಗೆ ವಿತರಣೆ ಮಾಡಲಾಗಿದೆ. ಆದರೆ, ಈ ಲಸಿಕೆಯಿಂದಲೂ ಅಡ್ಡಪರಿಣಾಮಗಳಾಗಿವೆ ಎಂದು ವರದಿ ತಿಳಿಸಿದೆ. ಬನಾರಸ್‌ನ ಹಿಂದೂ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಲಸಿಕೆ ಪಡೆದ ಶೇ.೩೦ ರಷ್ಟು ಜನರಲ್ಲಿ ಚರ್ಮ ಸಂಬಂದಿತ ಸಮಸ್ಯೆ, ನರಗಳಿಗೆ ಸಂಬಂಧಿಸಿದ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆಯಂತಹ ಮೂರು ಲಕ್ಷಣಗಳು ಕಂಡುಬಂದಿವೆ. ಗಂಟಲು ಕೆರೆತ, ಮೂಗು ಸೋರುವಿಕೆ, ಕೆಮ್ಮು ಮುಂತಾದ ಲಕ್ಷಣಗಳು ಕಂಡುಬಂದಿವೆ ಎಂದು ವರದಿ ಉಲ್ಲೇಖಿಸಿದೆ. ವರದಿಯನ್ನು ಸುಮಾರು ೯೨೬ ಜನರನ್ನು ಅಧ್ಯಯನಕ್ಕೊಳಪಡಿಸಿ, ಅವರನ್ನು ಫಾಲೋ ಆಪ್ ಮಾಡಿ ತಯಾರಿಸಲಾಗಿದೆ ಎಂದು ಸ್ಟ್ರಿಂಜರ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

ಕೋವಿಶೀಲ್ಡ್ ತಯಾರಿಸಿದ ಅಸ್ಟ್ರೊಜೆನಿಕಾ ಸಂಸ್ಥೆ ತಮ್ಮ ಲಸಿಕೆ ಪಡೆದವರಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಒಪ್ಪಿಕೊಂಡಿತ್ತು. ಲಸಿಕೆ ಪಡೆದವರು ತಣ್ಣಗಿನ ಪದಾರ್ಥಗಳ ಸೇವನೆ ಮಾಡಬಾರದು ಎಂದು ನಕಲಿ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿದ್ದವು. ಇದೀಗ ಕೋವ್ಯಾಕ್ಸಿನ್ ಬಗ್ಗೆಯೂ ಅಧಿಕೃತ ವರದಿಯೊಂದು ಹೊರಬಂದಿದ್ದು, ಲಸಿಕೆ ಪಡೆದವರ ಆತಂಕವನ್ನು ಹೆಚ್ಚಿಸಿದೆ.


Share It

You cannot copy content of this page