ರಾಜ್ಯದ ವಿಧಾನಪರಿಷತ್ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿಗೆ ಬಂಡಾಯ ಆತಂಕ ಮೂಡಿಸಿದೆ. ಏಕೆಂದರೆ ಕರಾವಳಿಯ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಲ್ಲಿ ಬಂಡಾಯ ಬಿಜೆಪಿಯನ್ನು ಕಾಡಿದೆ. ಜೊತೆಗೆ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲೂ ಬಂಡಾಯ ಬಿಜೆಪಿಗೆ ಆತಂಕ ತಂದಿದೆ.
ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ್
ಸಜ್ಜನ್ ಬಂಡಾಯ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿ ಅಮರ್ ನಾಥ್ ಪಾಟೀಲ್ ಅವರ ಎದುರು ಸ್ಪರ್ಧಿಸಿದ್ಧಾರೆ.