ಬೆಂಗಳೂರು: ಸಚಿವ ಸ್ಥಾನ ಮಿಸ್ ಆದರೂ, ಎರಡು ದಿನದಿಂದ ಸೈಲೆಂಟ್ ಆಗಿದ್ದ ಮಹದೇವಪ್ಪ, ಇಂದು ಬೆಳ್ಳಂಬೆಳಗ್ಗೆಯೇ ದೆಹಲಿಗೆ ತೆರಳಿದ್ದು, ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರು ಶಿಫಾರಸ್ಸು ಮಾಡಿದ್ದಾರೆ. ಆದರೆ, ಕಾರಣಾಂತರಗಳಿಂದ ಹೈಕಮಾಂಡ್ ಹೆಸರು ಬಿಟ್ಟಿರಬಹುದು ಎಂದಷ್ಟೇ ಹೇಳಿಕೆ ನೀಡಿದ್ದ ಅವರು, ಇಂದು ಇದ್ದಕ್ಕಿದ್ದಂತೆ ದೆಹಲಿಯ ಕಡೆಗೆ ಹೊರಟಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಹದೇವಪ್ಪ ಅವರ ದೆಹಲಿ ಪ್ರಯಾಣಕ್ಕೂ ಮೊದಲು ಅಹಿಂದ ನಾಯಕರು ಒಟ್ಟಾಗಿ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅಂತಿಮ ನಿರ್ಧಾರದ ಬಳಿಕವೇ ಮಹದೇವಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಯಾರನ್ನೂ ಭೇಟಿಯಾಗಲಿದ್ದಾರೆ. ಏನು ಚರ್ಚೆ ಮಾಡಲಿದ್ದಾರೆ ಎಂಬುದೆಲ್ಲವೂ ಇದೀಗ ಕುತೂಲಹಕ್ಕೆ ಕಾರಣವಾಗಿದೆ.
