ಆರೋಗ್ಯ ಉಪಯುಕ್ತ ಸುದ್ದಿ

ಕಲುಷಿತ ನೀರು ಸೇವಿಸಿ ೨೫ ಮಂದಿ ಅಸ್ವಸ್ಥ

Share It

ಹುಣಸೂರು: ಕಲುಷಿತ ನೀರು ಸಏವಿಸಿ ೨೫ ಕ್ಕೂಚ ಹೆಚ್ಚು ಮಂದಿ ಗ್ರಾಮಸ್ಥರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಕೊಳವೆಬಾವಿಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಹೀಗಾಗಿ, ವಿವಿಧ ಮೂಲಗಳಿಂದ ಗ್ರಾಮಸ್ಥರು ನೀರನ್ನು ಪಡೆಯುತ್ತಾರೆ. ಕಲುಷಿತ ನೀರನ್ನೇ ಸೇವಿಸುವ ಅನಿವಾರ್ಯ ಪರಿಸ್ಥಿತಿಯಿದೆ.

ಶನಿವಾರ ಇದ್ದಕ್ಕಿದ್ದಂತೆ ಗ್ರಾಮದ ಅನೇಕರು ವಾಂತಿ, ಬೇಧಿಯಂತಹ ಸಮಸ್ಯೆಯಿಂದ ಬಳಸುತ್ತಿದ್ದರು. ಅನೇಕ ಮಕ್ಕಳಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಇಡೀ ಗ್ರಾಮದ ಜನರನ್ನು ಕಾಡುತ್ತಿರುವ ಸಮಸ್ಯೆಯ ಬಗ್ಗೆ ಆರೋಗ್ಯಾಧಿಕಾರಿಗಳು ಪರೀಶೀಲನೆ ನಡೆಸಿದಾಗ ಕಲುಷಿತ ನೀರಿನ ಸೇವನೆಯೇ ಕಾರಣ ಎಂಬ ಅಂಶ ಕಂಡುಬAದಿದೆ.

ಹುಣಸೂರು ತಾಲೂಕು ಆಸ್ಪತ್ರೆಯಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪರಶೀಲಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮನೆಗಳಿಗೆ ಪೂರೈಕೆ ಮಾಡುವ ಕುಡಿಯುವ ನೀರಿನ ವ್ಯವಸ್ಥೆಗೆ ಸೇರಿಕೊಂಡ ಕಲುಷಿತ ನೀರಿನಿಂದ ಇಡೀ ಗ್ರಾಮದ ಜನರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.


Share It

You cannot copy content of this page