ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ವಿಕಸಿತ ಚಿಕ್ಕಬಳ್ಳಾಪುರವನ್ನಾಗಿ ಮಾಡುವ ಕನಸಿನಿಂದ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ, ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೆ ಸುಧಾಕರ್ ತಿಳಿಸಿದ್ದಾರೆ.
ದೇವನಹಳ್ಳಿಯ ಕುಂದಾಣ ಬಳಿಯ ಕೃಷ್ಣೋಧಯ ಕಲ್ಯಾಣ ಮಂಟಪದಲ್ಲಿ ಮೈತ್ರಿಕೂಟದ ವತಿಯಿಂದ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ ಏ.20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ ಚುನಾವಣಾ ಪ್ರಚಾರ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏ.20 ರಂದು ಆಗಮಿಸುತಿದ್ದಾರೆ ಕಾರ್ಯಕ್ರಮವು ಚಿಕ್ಕಬಳ್ಳಾಪುರ ಅಥವಾ ದೇವನಹಳ್ಳಿಯ ಸಮೀಪ ನಡೆಯಲಿದೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವ ಕಾರ್ಯಕ್ರಮದಲ್ಲಿ ಸುಮಾರು 2.50 ಲಕ್ಷ ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸೇರಿದಂತೆ ಮಾಜಿ ಸಚಿವರುಗಳು, ಹಾಲಿ ಶಾಸಕರು, ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಮೈತ್ರಿಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಭಾವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಲ್ಲಿ ಅವರ ಅಭ್ಯರ್ಥಿ ಪರವಾಗಿ ಮತ ಪ್ರಚಾರಕ್ಕೆ ಬಂದು ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಜನ ಸೋಲಿಸಿದ್ದಾರೆ ಎಂದು ನನ್ನ ಬಗ್ಗೆ ಟೀಕೆ ಮಾಡಿದ್ದಾರೆ ಹಾಗಾದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸ್ವಕ್ಷೇತ್ರದಲ್ಲಿ ಸೋತಿದ್ದು ಭ್ರಷ್ಟಾಚಾರ ಮಾಡಿದ್ದರಿಂದಾಗಿ ಎಂದು ನಾವು ಭಾವಿಸುದರಲ್ಲಿ ತಪ್ಪೇನಿದೆ ಎಂದ ಅವರು ನನಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ ಯುವಕರಿಗೆ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡುತ್ತೇನೆ. ಏ.21 ರಂದು ಬಾಗೇಪಲ್ಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಲನಚಿತ್ರ ನಟ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೂ ಕ್ಷೇತ್ರದ 8 ತಾಲ್ಲೂಕು ಗಳಲ್ಲಿ ಪ್ರಮುಖ ಮುಖಂಡರುಗಳ ಸಭೆ ಕರೆದು ಅಗತ್ಯ, ಸಿದ್ದತೆ ಮಾಡಿಕೊಳ್ಳಲಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಗಿ ಬೆಳೆ ಸೇರಿದಂತೆ ಕೃಷಿ ವಲಯಕ್ಕೆ ಬೆಂಬಲ ಬೆಲೆ ನೀಡಿದ್ದಾರೆ. ಕಾಂಗ್ರೇಸ್ ನವರು ಕೊಡುವ 2 ಸಾವಿರದಿಂದ ಬಡವರ ಬದುಕು ಹಸನಾಗದು, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಅಧಿಕಾರದ ಅವದಿಯಲ್ಲಿ ಶಾಲೆ, ಆಸ್ಪತ್ರೆ, ಸೇತುವೆ ಸೇರಿದಂತೆ ಒಂದಾದರು ಜ್ವಲಂತ ಸಮಸ್ಯೆಗಳು ಬಗ್ಗೆ ಸ್ಪಂದಿಸಿದ್ದಾರೆಯೇ? ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆಯಡಿ ಸಬ್ಸಿಡಿ ದರದಲ್ಲಿ ಗ್ಯಾಸ್ ವ್ಯವಸ್ಥೆ ಕಲ್ಪಿಸಿದೆ.
ಮಾತೃವಂದನಾ, ಅಟಲ್ ಪಿಂಚಣಿ ಒಳಗೊಂಡಂತೆ ಸುಮಾರು 12 ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ತಂದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬಿಜೆಪಿ ಅಲೆ ಇದೆ ಮೋದಿಯವರ ಸುಭದ್ರ ಆಡಳಿತಕ್ಕೆ ಜನ ಬೆಂಬಲ ವಿದೆ. ದೇಶದ ಸಮಗ್ರ ಅಭಿವೃದ್ದಿಗೆ ವಿಕಸಿತ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ ಇದಕ್ಕಾಗಿ ನಮ್ಮ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸಂಕಲ್ಪದಿಂದ ಸಂಕಲ್ಪ ಮಾಡಿದ್ದೇವೆ, ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಪಿಳ್ಳಮುನಿಶಾಮಪ್ಪ, ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾದ್ಯಕ್ಷ ಕನ್ನಮಂಗಲಪಾಳ್ಯ ಮುನೇಗೌಡ, ಬಿಜೆಪಿ ಅಧ್ಯಕ್ಷ ಸುಂದರೇಶ್, ಜೆಡಿಎಸ್ ಅಧ್ಯಕ್ಷ ಮುನೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌ಎಂ.ರವಿಕುಮಾರ್, ಮೈತ್ರಿ ಪಕ್ಷದ ಮುಖಂಡರಾದ ಎಸ್‌ಟಿಡಿ ನಾಗರಾಜುಗೌಡ, ಇರಿಗೇನಹಳ್ಳಿ ಶ್ರೀನಿವಾಸ್, ವೆಂಕಟಾಪುರ ಲಕ್ಷ್ಮಣ್ ಸೀಕಾನಹಳ್ಳಿ ವಿನಯ್ ಕುಮಾರ್, ರವಿಚಂದ್ರ, ಆಲೂರು ದುದ್ದನಹಳ್ಳಿ ಮುನಿರಾಜು, ರಘುಗೌಡ, ಕುಂದಾಣ ಬಾಲಕೃಷ್ಣ, ಇಂಡ್ರಸನಹಳ್ಳಿ ಗೋಪಿನಾಥ್, ಬಚ್ಚಹಳ್ಳಿ ಬಿಕೆ.ನಾರಾಯಣಸ್ವಾಮಿ, ದೇವನಹಳ್ಳಿ ಕೇಶವ್, ಮನಗೊಂಡನಹಳ್ಳಿ ಜಗದೀಶ್, ವೆಂಕಟೇಶಪ್ಪ, ದೇವಗಾನಹಳ್ಳಿ ಕ್ಯಾತೇಗೌಡ, ಸೂಲಕುಂಟೆ ಜಗದೀಶ್, ಟಿ ಹೊಸಹಳ್ಳಿ ರವಿ, ಮಜ್ಜಿಗೆಹೊಸಹಳ್ಳಿ ಗೋವಿಂದರಾಜ್ ಮುಂತಾದ ಮುಖಂಡರು ಹಾಗೂ ಮೈತ್ರಿಕೂಟದ ಕಾರ್ಯಕರ್ತರು ಹಾಜರಿದ್ದರು.